Click here for the english version of this article
ಪ್ರಜಾಪ್ರಭುತ್ವದ ನಾಲ್ಕು ಆಧಾರ ಸ್ತಂಭಗಳೆಂದರೆ
- ಶಾಸಕಾಂಗ (ಸರಕಾರ, ಮಂತ್ರಿಗಳು, ಶಾಸಕರು, ಲೋಕಸಭಾ ಸದಸ್ಯರು ಇತ್ಯಾದಿ)
- ರಾಜ್ಯಾಂಗ (ಅಧಿಕಾರಿಗಳು)
- ನ್ಯಾಯಾಂಗ (ವಕೀಲರು, ನ್ಯಾಯಮೂರ್ತಿಗಳು)
- ಪತ್ರಿಕೋದ್ಯಮ (ಮಾಧ್ಯಮ, ಪತ್ರಕರ್ತರು)
ನಮಗೆಲ್ಲ ತಿಳಿದಿರುವಂತೆ ಭಾರತದಲ್ಲಿ ಶಾಸಕಾಂಗ ಮತ್ತು ರಾಜ್ಯಾಂಗದ ಮೇಲೆ ಜನರಿಗಿರುವ ನಂಬಿಕೆ ಅಷ್ಟಕ್ಕಷ್ಟೆ..
ಸರಕಾರ, ಮಂತ್ರಿಗಳು, ಶಾಸಕರು ಇವರಲ್ಲಿ ಹೆಚ್ಚಿನ ಮಂದಿ ಭ್ರಷ್ಟರು, ಅಧಿಕಾರಿಗಳೂ ಇದಕ್ಕೆ ಹೊರತಲ್ಲ.. ಎಲ್ಲ ಕೆಲಸಕ್ಕೂ ಲಂಚ ಕೊಡಬೇಕು..
ಜನರಿಗೆ ಅಲ್ಪ ಸ್ವಲ್ಪ ವಿಶ್ವಾಸವೇನಾದರೂ ಉಳಿದಿದ್ದರೆ, ಅದು ನ್ಯಾಯಾಂಗ ಹಾಗೂ ಮಾಧ್ಯಮದ ಮೇಲೆ ಮಾತ್ರ..
ಪರಿಸ್ಥಿತಿ ಹೀಗಿರುವಾಗ, ನಮ್ಮ ಕೇಂದ್ರ ಸರಕಾರ ಏನು ಮಾಡಲು ಹೊರಟಿದೆ ನೋಡಿ!
ಸರಕಾರ ಒಂದು ಹೊಸ ಕಾನೂನನ್ನು ಜಾರಿ ಮಾಡಲು ಯತ್ನಿಸುತ್ತಿದೆ, ಅದರ ಪ್ರಕಾರ NDTV, CNN-IBN, StarNews, ಇತ್ಯಾದಿ ದೇಶದ ಪ್ರತಿಯೊಂದು ಮಾಧ್ಯಮ ವಾಹಿನಿಯು (cable channel), ಯಾವುದೇ ಸುದ್ದಿಯನ್ನು ಪ್ರಕಟಿಸುವ ಮುನ್ನ ಸರಕಾರದ ಅಪ್ಪಣೆ ಪಡೆಯಬೇಕು!!
ಈ ಕಾನೂನಿನ ಪ್ರಕಾರ, ದೇಶದ ಪ್ರತಿಯೊಂದು ಮಾಧ್ಯಮ ಹಾಗೂ ಸುದ್ದಿ ವಾಹಿನಿಯಲ್ಲಿ ಸರಕಾರದ ಪ್ರತಿನಿಧಿಯೊಬ್ಬರಿರುತ್ತಾರೆ, ಹಾಗೂ ಆ ವಾಹಿನಿಯಲ್ಲಿ ಪ್ರಕಟವಾಗುವ ಪ್ರತಿಯೊಂದು ಸುದ್ದಿಯನ್ನು ಈ ಸರಕಾರೀ ಪ್ರತಿನಿಧಿ ಮೊದಲು ನೋಡಿ, ಯಾವ ತಕರಾರನ್ನೂ ಎತ್ತದಿದ್ದರೆ ಮಾತ್ರ ಆ ಸುದ್ದಿಯನ್ನು ಪ್ರಕಟಿಸತಕ್ಕದ್ದು!
ಈ ಹೊಸ ಕಾನೂನಿನ ಪ್ರಕಾರ, ಮಾಧ್ಯಮದ ಸ್ವಾತಂತ್ರ್ಯಹರಣವಾಗಲಿದೆ. ಎಲ್ಲ ಸುದ್ದಿವಾಹಿನಿಗಳೂ ಇನ್ನು ಮೇಲೆ ದೂರದರ್ಶನದ ಹಾಗೆ ಸರಕಾರೀವಾಹಿನಿಗಳಾಗುತ್ತವೆ!
ಈ ಹೊಸ ಕಾನೂನಿನ ಪ್ರಕಾರ, ಕೈಗಾರಿಕಾ ಸಂಬಂಧಿ ವಿವಾದಗಳನ್ನು ಸುದ್ದಿಮಾಧ್ಯಮಗಳು ಪ್ರಕಟಿಸುವಂತಿಲ್ಲ! ಆದ್ದರಿಂದ ಈ ಕಾನೂನು ಜಾರಿಯಾದ ಮೇಲೆ ಸಿಂಗೂರ್, ನಂದಿಗ್ರಾಮದಂತಹ ಸುದ್ದಿಗಳು ಪ್ರಕಟವಾಗುವುದಿಲ್ಲ!
ಈ ಹೊಸ ಕಾನೂನಿನ ಪ್ರಕಾರ, ಜನತೆಯ ನೆಮ್ಮದಿ (public order) ಕೆಡಿಸುವಂಥಹ ಸುದ್ದಿಯನ್ನು ಪ್ರಕಟಿಸುವಂತಿಲ್ಲ! ಜನತೆಯ ನೆಮ್ಮದಿ ಕೆಡಿಸುವಂಥಹ ಸುದ್ದಿ ಯಾವುದೆಂಬುದನ್ನು ಸರಕಾರ ನಿರ್ಧರಿಸುತ್ತದೆ!
ಈ ಹೊಸ ಕಾನೂನಿನ ಪ್ರಕಾರ, ತೆಹೆಲ್ಕಾದಂಥಹ Sting Journalism ನಡೆಸುವ ಮೊದಲು ಮಾಧ್ಯಮಗಳು ಅದಕ್ಕೆ ಸಂಬಂಧಪಟ್ಟವರಿಂದ ಅನುಮತಿ ಪಡೆಯಬೇಕು!! ಕೋಳೀ ಕೇಳೀ ಮಸಾಲೆ ಅರಿಯೊಕ್ಕಾಗುತ್ತ್ಯೇ? ಎಂಥಹ ಮೂರ್ಖ ಕಾನೂನು!
ಇನ್ನು ಒಂದು ಒಂದೂವರೆ ವರ್ಷದಲ್ಲಿ ಸಾರ್ವತ್ರಿಕ ಚುನಾವಣೆಗಳಿರುವುದರಿಂದ, ಯು.ಪಿ.ಎ. ಸರಕಾರಕ್ಕೆ ಇಂಥಹ ಒಂದು ಕಾನೂನಿನ ಅವಶ್ಯಕತೆ ಇದೆ. ಜನಸಾಮಾನ್ಯರ ಸರಕಾರ (common man’s government) ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ UPA ಮಾಡಿರುವ ಎಲ್ಲ ಕೆಲಸಗಳೂ ಜನವಿರೋಧಿ, ಅಗತ್ಯ ವಸ್ತುಗಳ ಬೆಲೆ ಏರಿದೆ, ಜನರಲ್ಲಿ ಅಸಮಾಧಾನವಿದೆ, ರಾಜ್ಯ ಚುನಾವಣೆಗಳಲ್ಲಿ UPA ಹಾಗೂ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ, ಆದ್ದರಿಂದ ಸುದ್ದಿ ಮಾಧ್ಯಮವನ್ನು ಕೆಟ್ಟಿ ಹಾಕಿ, ತನಗೆ ಅನುಕೂಲವಾಗುವಂತಹ ಸುದ್ದಿಯನ್ನು ಮಾತ್ರ ಪ್ರಕಟಿಸಿ, ಸರಕಾರಿ ವಿರೋಧಿ ಸುದ್ದಿಗೆ ಕಡಿವಾಣ ಹಾಕಲು, UPA ಸರಕಾರ ಈ ಹೊಸ ಮಾಧ್ಯಮ ಕಾನೂನಿನ ಪಿತೂರಿ ನಡೆಸಿದೆ.
ಏನೇ ಆದರೂ ‘ಅಂತರ್ಜಾಲ’ (internet) ಎಂಬ ಲೋಕದಲ್ಲಿ ಯಾವುದೇ ಸುದ್ದಿ, ಕತ್ತರಿ ಇಲ್ಲದೇ ಪ್ರಸಾರವಾಗುತ್ತದೆ ಎಂಬುದು ಈ ಸರಕಾರಕ್ಕೆ ತಿಳಿದಂತಿಲ್ಲ! ನಮ್ಮ ಅಂತರ್ಜಾಲದಲ್ಲಿ ಎಲ್ಲಾ ಸುದ್ದಿಯೂ ಕ್ಷಣಮಾತ್ರದಲ್ಲಿ ವಿಶ್ವದೆಲ್ಲೆಡೆ ಪ್ರಕಟವಾಗುತ್ತದೆ!
ಅಂತರ್ಜಾಲವನ್ನು ನಿಯಂತ್ರಿಸಲು ಸರಕಾರ ಏನು ಮಾಡುತ್ತದೆ?? ಚೀನಾದ ಕಮ್ಯೂನಿಸ್ಟ್ ಸರಕಾರದ ಹಾಗೆ, ‘ಅಂತರ್ಜಾಲ ಸೋಸು’ವ (internet filters) ಚಿಂತನೆಯೇನಾದರೂ UPA ಕೆಂದ್ರ ಸರಕಾರಕ್ಕಿದೆಯೆ? ಅದು ಅಷ್ಟು ಸುಲಭವಲ್ಲ ಬಿಡಿ, ಚೀನದಲ್ಲೇ ಜನ ಸರಕಾರೀ ಬೇಲಿ ದಾಟಿ ಅಂತರ್ಜಾಲದಲ್ಲಿ ಎಲ್ಲಾ ಸುದ್ದಿನೋಡುತ್ತಾರೆ, ಹೀಗಿರುವಾಗ ಭಾರತದಲ್ಲಿ ನಮಗೆ ನೋಡಲಾಗುವುದಿಲ್ಲವೆ!
ಆದರೆ ನೋಡಿ, ಎಂಥಹ ಸರಕಾರಕ್ಕೆ ಮತ ಚಲಾಯಿಸಿ ಅಧಿಕಾರಕ್ಕೆ ತಂದಿದ್ದೀರಿ ಎಂದು!
ಮಾಹಿತಿ ಹಕ್ಕು? ಏನು ಹಾಗೆಂದರೆ? ಕ್ಷಮಿಸಿ, ಇದು ಕಾಂಗ್ರೆಸ್ಸಿನ UPA ಸರಕಾರ, ನಿಮ್ಮ ಅದ್ರಷ್ಟವನ್ನು ಮುಂದಿನ ಚುನಾವಣೆಯಲ್ಲಿ ಪರೀಕ್ಷಿಸಿ ನೋಡಿ…