ಇತ್ತೀಚಿನ ಸುದ್ದಿ:
“ಪಾಕಿಸ್ತಾನಿ ಮಿಲಿಟರಿ ಮೂಲಗಳ ಪ್ರಕಾರ ‘ಪಾಕಿಸ್ತಾನವು ತನ್ನ ಪರಮಾಣು ಬಾಂಬನ್ನು ಹೊತ್ತೊಯ್ಯುವ ಕ್ಷಮತೆಯುಳ್ಳ ರಾಡಾರ್ ನಿರ್ದೇಶಿತ ಕ್ಷಿಪಣಿಯ ಯಶಸ್ವಿ ಪರೀಕ್ಷೆ ನಡೆಸಿದೆ’. ಈ ಸಂಬಂಧ ಪಾಕ್ ಅಧ್ಯಕ್ಷ ಪರ್ವೆಜ್ ಮುಷರ್ರಫ್ ಮತ್ತು ಪ್ರಧಾನಿ ಶೌಕತ್ ಅಜೀಜ್ ದೇಶದ ವಿಜ್ಞಾನಿ ಹಾಗೂ ತಂತ್ರಜ್ಞಾನಿಗಳನ್ನು ಅಭಿನಂದಿಸಿದ್ದಾರೆ!”
ನಿಜಕ್ಕೂ ಇದರ ಅರ್ಥ ಏನೆಂದರೆ
“ಪಾಕಿಸ್ತಾನವು ಉತ್ತರ ಕೊರಿಯಾ ತಯಾರಿತ ಪರಮಾಣು ಕ್ಷಮತೆಯ ಕ್ಷಿಪಣಿಯನ್ನು ಸೌದಿ ಅರೇಬಿಯಾದ ಹಣ ಸಹಾಯದಿಂದ ಕೊಂಡುಕೊಂಡು, ನಂತರ ಪಾಕ್ ವಿಜ್ಞಾನಿಗಳು ಆ ಕ್ಷಿಪಣಿಯ ಎಡಪಂಥೀಯ ಕೆಂಬಣ್ಣಕ್ಕೆ ಪಾಕಿ ಹಸಿರು ಬಣ್ಣ ಬಳಿದು, ಅದಕ್ಕೆ ಬಾರತದ ಮೇಲೆ ಹಿಂದೆ ದಾಳಿ ನಡೆಸಿದ್ದ ಮುಸ್ಲಿಂ ದಂಡುಕೋರರಾದ ಘೌರಿ, ಘಙ್ನಿ ಮುಂತಾದವರ ಹೆಸರನ್ನಿಟ್ಟು, ನಂತರ ಚೀನಾದ ತಂತ್ರಜ್ಞರ ಸಹಾಯದಿಂದ, ಅದರ ಪರೀಕ್ಷೆ ನಡೆಸಿದ್ದಾರೆ!”
ಪಾಕಿಸ್ತಾನವು ಇಂಥಹ ಪರೀಕ್ಷೆಗಳನ್ನು ಆಗಾಗ ನಡೆಸುತ್ತಿರುತ್ತದೆ. ಕಾರಣ?
ಉತ್ತರ ಕೊರಿಯಾ ಮತ್ತು ಚೀನಾ ತಮ್ಮ ಕಳಪೆ ಗುಣಮಟ್ಟದ ಕಡಿಮೆ ಬೆಲೆಯ ಉತ್ಪನ್ನಗಳಿಗೆ ಪ್ರಸಿದ್ಧವಾಗಿವೆ. ಆದ್ದರಿಂದ ಪಾಕಿಸ್ತಾನಕ್ಕೆ ತಾನು ಕೊಂಡುಕೊಂಡ ಕ್ಷಿಪಣಿಗಳ ಗುಣಮಟ್ಟದ ಬಗ್ಗೆ ಕಳವಳವಿದೆ. ಇಂಥಹ ಆಗಾಗಿನ ಪ್ರಯೋಗಗಳಿಂದ ಅದು ಈ ಕ್ಷಿಪಣಿಗಳ ಗುಣಮಟ್ಟ ಪರೀಕ್ಷಿಸುವುದರೊಂದಿಗೆ, ಆ ಕ್ಷಿಪಣಿಗಳನ್ನು ಉಡಾಯಿಸುವ ಪರಿ ತನ್ನ ವಿಜ್ಞಾನಿಗಳಿಗೆ ತಿಳಿದಿದೆಯೆಂದು ಖಾತ್ರಿ ಪಡಿಸಿಕೊಳ್ಳುತಿರುತ್ತದೆ
can you please tell me more about this topic?
You can click here for english version of this
http://hitxp.wordpress.com/2007/07/26/yet-another-pak-missile-test/