ನಮ್ಮ ಜನ ಹೆಂಗಂದ್ರೆ
೪೫ ರೂಪಾಯಿ ಕೊಟ್ಟು ಕೋಕಾಕೋಲಾ ತಗೊಳ್ತಾರೆ, ಆ ಕಂಪನಿಗೆ ಅದರಲ್ಲಿ ೪೦ ರೂಪಾಯಿ ಲಾಭ!
ಅದೇ ಜನ, ಎಳನೀರು ಮಾರುವವನು ೧೦ ರೂಪಾಯಿ ಅಂದರೆ ೬ ರೂಪಾಯಿಗೆ ಕೇಳುತ್ತಾರೆ!!
ಕೋಕಾಕೋಲಾ ಆರೋಗ್ಯಕ್ಕೆ ಹಾನಿಕಾರಕ, ಎಳನೀರು ಅತ್ಯುತ್ತಮ ಪಾನೀಯ!
ಬಿಗ್ ಬಜಾರ್, ಸುಭೀಕ್ಷಾ, ಮಂಡೆ ಟು ಸಂಡೆ ಇತ್ಯಾದಿ ಮಳಿಗೆಗಳಲ್ಲಿ ನೂರಾರು ರೂಪಾಯಿ ಕೊಟ್ಟು ಹಣ್ಣು, ತರಕಾರಿ ಕೊಳ್ಳುತ್ತಾರೆ
ಮನೆ ಬಾಗಿಲಿಗೆ ಬರುವ ಹಣ್ಣು ತರಕಾರಿ ಗಾಡಿ ಮಾರುವವನ ಬಳಿ ೨-೫ ರೂಪಾಯಿಗೆ ಚೌಕಾಸಿ ಮಾಡ್ತಾರೆ!
ಬಹುರಾಷ್ಟ್ರೀಯ ಕಂಪೆನಿಗಳು ಮಾರುವ ಹಣ್ಣು, ತರಕಾರಿಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ಹೆಚ್ಚಿನ ಫಸಲಿಗಾಗಿ ತಳಿಗಳನ್ನು ಕ್ರತಕವಾಗಿ ಮಾರ್ಪಾಡು ಮಾಡಿರುತ್ತಾರೆ (genetically modified). ಇವು ನೋಡಲಷ್ಟೇ ಅಂದವಾಗಿರುತ್ತವೆ. ಇದನ್ನು ತಿನ್ನುವುದರಿಂದ ನಮ್ಮ ದೇಹದ ಮೇಲಾಗಬಹುದಾದ ಪರಿಣಾಮಗಳ ಅಧ್ಯಯನ ಮಾಡಲಾಗಿಲ್ಲ. ವಿದೇಶಗಳಲ್ಲಿ ಇಂಥಹ ಕ್ರತಕ ತಳಿಗಳ ಹಣ್ಣು ತರಕಾರಿ ಮಾರುವಾಗ ಅವುಗಳನ್ನು ‘ಕ್ರತಕ’ (genetically modified) ಎಂದು ತಪ್ಪದೇ ನಮೂದಿಸಬೇಕು. ನಮ್ಮಲ್ಲಿ ಹಾಗಲ್ಲ.
ಮನೆ ಬಾಗಿಲಿಗೆ ಬರುವವನ ಗಾಡಿಯವನ ಬಳಿ ಸಿಗುವ ಹಣ್ಣು ತರಕಾರಿಗಳು ಇಂಥಹ ಕ್ರತಕ ತಳಿಗಳ ಫಸಲಲ್ಲ.
ಇಂದು ಬಹುತೇಕ ವಿದೇಶಿ ಕಂಪೆನಿಗಳು ನಮ್ಮ ದೇಶದಲ್ಲಿ ಮಾರುವ ಪದಾರ್ಥಗಳು ಆ ವಿದೇಶದಲ್ಲಿ ಸಿಗುವ ಅದೇ ಪದಾರ್ಥಕ್ಕಿಂತ ಕಡಿಮೆ ಗುಣಮಟ್ಟದ ಪದಾರ್ಥಗಳು!! ನಮ್ಮ ಜನ ಅದನ್ನೇ ಅತ್ಯುತ್ಕ್ರಷ್ಟವೆಂದು ನಂಬಿ ಹೆಚ್ಚಿನ ಬೆಲೆ ತೆತ್ತು ಇಲ್ಲಿ ಕೊಳ್ಳುತ್ತಾರೆ. ಈ ವಿದೇಶಿ ಕಂಪನಿಗಳಿಗೆ ಭಾರತದ ಮಾರುಕಟ್ಟೆ ಎಂದರೆ ಅವರ ದೇಶದಲ್ಲಿ ತಿರಸ್ಕರಿಸಲ್ಪಟ್ಟ ಕಡಿಮೆ ಗುಣಮಟ್ಟದ ಮಾಲನ್ನು ಮಾರುವ ಜಾಗ. ಇದು ನನ್ನ ಸ್ವಂತ ಅನುಭವ. NIKE ಕಂಪನಿಯ Shoeಗಳನ್ನು ಭಾರತದಲ್ಲಿ ನೋಡಿ ಬಲ್ಲವನಾಗಿದ್ದ ನಾನು, londonನಲ್ಲಿ ಅದೇ ಬೆಲೆಗೆ ಇನ್ನೂ ಉತ್ತಮ ಗುಣಮಟ್ಟದ ಅದೇ shoeಗಳನ್ನು ನೋಡಿದಾಗ ಕಂಗಾಲಾದೆ! ಎಷ್ಟೊಂದು ವಿದೇಶಿ ಕಂಪನಿಗಳ ಬಟ್ಟೆಯಲ್ಲೂ ಇದೇ ಅನುಭವವಾಗಿದೆ ನನಗೆ.
ಇನ್ನೊಂದೆಡೆ ನಮ್ಮಲ್ಲಿ ಬೆಳೆಯುವ ಅತ್ಯುತ್ತಮ ತಳಿಗಳನ್ನೆಲ್ಲ ದುಡ್ಡಿನ ಆಸೆಗೆ ವಿದೇಶಕ್ಕೆ ರಫ್ತು ಮಾಡಲಾಗುತ್ತಿದೆ! ಉದಾಹರಣೆಗೆ, ನಾನೇ ನೋಡಿದಂತೆ ನಮ್ಮಲ್ಲಿ ಬೆಳೆಯುವ ಅತ್ಯುತ್ತಮ ತಳಿಯ ಮಾವಿನ ಹಣ್ಣನ್ನು ಅಮೇರಿಕಕ್ಕೆ ಈ ವರ್ಷದಿಂದ ರಫ್ತು ಮಾಡಲಾಗುತ್ತಿದೆ! ನಮಗಿಲ್ಲಿ ಸಿಗುವುದು ಅಳಿದುಳಿದ ರಫ್ತಾಗದ ಹಣ್ಣು ಮಾತ್ರ!
ಮತ್ತೊಂದೆಡೆ ಇನ್ನೂ ಕೆಲ ಬಹುರಾಷ್ಟ್ರೀಯ ಕಂಪನಿಗಳು, ನಮ್ಮದೇ ರೈತರ ಬಳಿ ೧೦ ರೂಪಾಯಿಗೆ ಖರೀದಿಸಿದ ಸರಕನ್ನು ನಮಗೇ ಪುನಹ ೧೦೦ ರೂಪಾಯಿಗೆ ಮಾರುತ್ತಾರೆ! ಚಿಲ್ಲರೆ ವ್ಯಾಪಾರದಲ್ಲಿ ಬಹುರಾಷ್ತ್ರೀಯ ಕಂಪೆನಿಗಳ ಪ್ರವೇಶವಾದಾಗಿನಿಂದ ನಮ್ಮ ಕಿರಾಣಿ ಅಂಗಡಿಗಳು ಮುಚ್ಚುವ ಪರಿಸ್ಥಿತಿ ಬಂದಿದೆ!!