ನಮ್ಮ ಜನ ಹೆಂಗಂದ್ರೆ
೪೫ ರೂಪಾಯಿ ಕೊಟ್ಟು ಕೋಕಾಕೋಲಾ ತಗೊಳ್ತಾರೆ, ಆ ಕಂಪನಿಗೆ ಅದರಲ್ಲಿ ೪೦ ರೂಪಾಯಿ ಲಾಭ!
ಅದೇ ಜನ, ಎಳನೀರು ಮಾರುವವನು ೧೦ ರೂಪಾಯಿ ಅಂದರೆ ೬ ರೂಪಾಯಿಗೆ ಕೇಳುತ್ತಾರೆ!!
ಕೋಕಾಕೋಲಾ ಆರೋಗ್ಯಕ್ಕೆ ಹಾನಿಕಾರಕ, ಎಳನೀರು ಅತ್ಯುತ್ತಮ ಪಾನೀಯ!
ಬಿಗ್ ಬಜಾರ್, ಸುಭೀಕ್ಷಾ, ಮಂಡೆ ಟು ಸಂಡೆ ಇತ್ಯಾದಿ ಮಳಿಗೆಗಳಲ್ಲಿ ನೂರಾರು ರೂಪಾಯಿ ಕೊಟ್ಟು ಹಣ್ಣು, ತರಕಾರಿ ಕೊಳ್ಳುತ್ತಾರೆ
ಮನೆ ಬಾಗಿಲಿಗೆ ಬರುವ ಹಣ್ಣು ತರಕಾರಿ ಗಾಡಿ ಮಾರುವವನ ಬಳಿ ೨-೫ ರೂಪಾಯಿಗೆ ಚೌಕಾಸಿ ಮಾಡ್ತಾರೆ!
ಬಹುರಾಷ್ಟ್ರೀಯ ಕಂಪೆನಿಗಳು ಮಾರುವ ಹಣ್ಣು, ತರಕಾರಿಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. [...]
Archive for June, 2007
ನಮ್ಮ ಜನ ಹೆಂಗಂದ್ರೆ…
Posted in India, MNC, export, gurudev, hitxp, multinationals, retail, ಕನ್ನಡ, ಕಿರಾಣಿ, ಗುರುದೇವ, ಬಹುರಾಷ್ಟ್ರೀಯ, ಭಾರತ, ಮಾವು, ರಫ್ತು, ವಿದೇಶಿ, ವ್ಯಾಪಾರ on June 17, 2007 | Leave a Comment »
ಕನ್ನಡ ಸಂಗೀತ ಪ್ರಾಕಾರಗಳು
Posted in gurudev, hitxp, kannada, somberi, sugam sangeeth, ಕನ್ನಡ, ಕೀರ್ತನೆ, ಗುರುದೇವ, ಜಾನಪದ, ಸಂಗೀತ, ಸಾಹಿತ್ಯ, ಸುಗಮ ಸಂಗೀತ, ಸೋಂಬೇರಿ on June 17, 2007 | Leave a Comment »
‘ಕುರಿತೋದದೆಯಂ ಕಾವ್ಯಪ್ರಯೋಗ ಪರಿಣತಮತಿಗಳ್’ – ಹೀಗೆಂದು ನ್ರಪತುಂಗ ಕವಿ ಕನ್ನಡಿಗರನ್ನು ಬಣ್ಣಿಸಿದ್ದಾನೆ! ಓದು ಬರಹ ತಿಳಿಯದ ಕನ್ನಡಿಗರೂ ಕಾವ್ಯ-ಕವಿತೆ ಬಲ್ಲವರಾಗಿದ್ದರು ಎನ್ನುತ್ತಾನೆ ಆತ! ಜಾನಪದ ಗೀತೆಗಳು ಕನ್ನಡದ ಹಳ್ಳಿಹಳ್ಳಿಗಳಲ್ಲೂ ಪ್ರಸಿದ್ಧ! ಈ ಗೀತೆಗಳ ರಚನೆಕಾರರು ಸಾಮಾನ್ಯ ಹಳ್ಳಿಜನ! ಸಂಗೀತವೂ ಅವರದ್ದೇ!
ಇನ್ನು ಸುಗಮ ಸಂಗೀತ. ಇದು ಕಾವ್ಯ ಗಾಯನ. ಕುವೆಂಪು, ಜಿ ಎಸ್ ಎಸ್, ಬೇಂದ್ರೆ ಮುಂತಾದ ಮಹಾಕವಿಗಳ ಗೀತೆಗಳ ಗಾಯನ. ಇಲ್ಲಿ ಸಂಗೀತಕ್ಕಿಂತ ಸಾಹಿತ್ಯ ಮುಖ್ಯ. ಆದ್ದರಿಂದ ಸುಗಮ ಸಂಗೀತವನ್ನು ಕೊಳಲು/ವೀಣೆಯಲ್ಲಿ ನುಡಿಸುವುದಿಲ್ಲ. ಕಾಳಿಂಗರಾವ್, ಮೈಸೂರು ಅನಂತಸ್ವಾಮಿಯವರಂತಹ ಗಾಯಕರೇ [...]