ಹಂಸವೆಲ್ಲಿ ಹಾರುವೆ?
ಸಪ್ತ ಸಾಗರದಾಚೆಗೆ, ಸುಪ್ತ ಮನಸಿನ ತೀರಕೆ
ನಿನ ಕನಸಿನ ರೆಕ್ಕೆಯ ಗರಿ ಬಿಚ್ಚಿ
ಒಳ ಮನಸಿನ ದಿಟ್ಟೆಯ ಗೆರೆ ಹಚ್ಚಿ
ದೂರತೀರದಾಚೆಗೆ ನೂರು ಮನಸಿನ ವೇಗದಿ
ನೆನಪಿನ ಮನೆಯಂಗಳದಿಂದ
ಭರವಸೆಗಳ ಕಂಗಳ ತುಂಬಿ
ನಾಳೆಗಳ ನಾಡಿಗೆ ಸಾಧನೆಯ ಗೂಡಿಗೆ
ಸರಿಗಮಗಳ ಗಾಳಿಯನೇರಿ
ಅಪಸ್ವರಗಳ ಧಾಳಿಯ ಮೀರಿ
ರಾಗಗಳ ನಾಡಿಗೆ ಅನುರಾಗದ ಗೂಡಿಗೆ
ನಿನ್ನೆಯ ಕಹಿ ಜಾಲವ ಹರಿದು
ನಿನ್ನಯ ವರ ಮಾಲೆಯ ಹಿಡಿದು
ನಲ್ಲನಿರುವ ನಾಡಿಗೆ ನಾಳೆ ಬಾಳೊ ಗೂಡಿಗೆ
-ಗೀಚಿದವರು ಗುಂಗುರು ಗುರು