ದುಂಬಿಯ ಝೇಂಕಾರ ಋಷಿ ಮುನಿ ಓಂಕಾರ
ಮಂತ್ರದ ಹ್ರೀಂಕಾರ ಸಿಂಹದ ಹೂಂಕಾರ
ನಾದಲೀನ ಲೀನನಾದೆ ನಾ ನೀದಮಾಗ ಗಾನದಿಂ ದಿನ ||
ಬೆಳ್ಳಿಕಿರಣಗಳ ಅರುಣರಾಗ ಬಳ್ಳಿಮರದಡಿಯ ನಿಸರಿಗಮಗ
ಗಲ್ಲಿಹೈಕಳ ಕುಣಿತ, ಲಾಗ, ಹಲ್ಲಿ ಮೈಮರೆತು ಲೊಚೆದ ರಾಗ
ನಾ ತಲ್ಲೀನ ನಾದೆನೀ ದಿನ ಧೀಂ ತಿಲ್ಲಾನವಾಯಿತೀ ಮನ ||
ಜಲದ ಧಾರೆ ಕಲಕಲಕಲರವ ಜಲಜದೊಡತಿ ಕರ ಸರಿವ ಪರಿಯವ
ಜಲದಿ ನೀರೆ ನಲಿ ನಲಿವ ಉಲಿತವ ಜಳಕವಾಡುತಿರೆ ಬಳುಕೊ ಅಲೆ ರವ
ಪುರುಷ ಪ್ರಕೃತಿ ಸರಿಗ ಸಂಗಮ ಜಗದ ಸಂಸ್ಕೃತಿ ಎನಿತು ಧಿಂಧಿಮ ||
-ಗೀಚಿದವರು ಗುಂಗುರು ಗುರು