ಕನ್ನಡದ ಬಗ್ಗೆ ನಿಮಗೆಷ್ಟು ಗೊತ್ತು?
- ಭಾರತೀಯ ಭಾಷೆಗಳಲ್ಲಿ ಸಂಸ್ಕ್ರತ ಹಾಗೂ ತಮಿಳಿನ ನಂತರ ಕನ್ನಡವೇ ಅತ್ಯಂತ ಹಳೆಯ ಭಾಷೆ
- ಕನ್ನಡಕ್ಕೆ ೨೦೦೦ ವರ್ಷಗಳ ಇತಿಹಾಸವಿದೆ
- ಕನ್ನಡಕ್ಕೆ ಅತಿ ಹೆಚ್ಚು ಜ್ನಾನಪೀಠ ಪ್ರಶಸ್ತಿಗಳು ದೊರೆತಿವೆ. ಇದುವರೆಗೂ ಒಟ್ಟು 7. ರಾಷ್ತ್ರ ಭಾಷೆ ಹಿಂದಿಗೆ 6 ದೊರೆತಿವೆ.
- ಆಚಾರ್ಯ ವಿನೋಭಾ ಭಾವೆ ಕನ್ನಡದ ಲಿಪಿಯನ್ನು ‘ವಿಶ್ವ ಲಿಪಿಗಳ ರಾಣಿ’ ಎಂದು ಕರೆದರು
- ಇಂಗ್ಲೀಷಿಗೆ ಸ್ವಂತ ಲಿಪಿಯಿಲ್ಲ, ಅದನ್ನು ರೋಮನ್ ಲಿಪಿಯಲ್ಲಿ ಬರೆಯುತ್ತಾರೆ. ಹಿಂದಿಗೆ ಸ್ವಂತ ಲಿಪಿಯಿಲ್ಲ, ಅದನ್ನು ದೇವನಾಗರಿ ಲಿಪಿಯಲ್ಲಿ ಬರೆಯುತ್ತಾರೆ. ಕನ್ನಡಕ್ಕೆ ಸ್ವಂತ ಲಿಪಿಯಿದೆ.
- ಅಮೋಘವರ್ಷನು ತನ್ನ ಕವಿರಾಜಮಾರ್ಗದಲ್ಲಿ ‘ಕಾವೇರಿಯಿಂದ ಗೋದಾವರಿವರೆಗಿರ್ಪ..’ ಎಂದು ಕನ್ನಡನಾಡಿನ ಬಗ್ಗೆ ಬರೆದಾಗ ಹಿಂದಿ ಇನ್ನೂ ಹುಟ್ಟಿರಲಿಲ್ಲ, ಇಂಗ್ಲೀಷು ಇನ್ನೂ ಶೈಶವಾವಸ್ಥೆಯಲ್ಲಿತ್ತು
- ಭಾರತೀಯ ಭಾಷೆಗೆ ಹೊರದೇಶದವರೊಬ್ಬರು ಪದಕೋಶ ಬರೆದಿರುವುದು ಕನ್ನಡಕ್ಕೆ ಮಾತ್ರ . ಅವರೆ ಕಿಟ್ಟೆಲ್
- ರಗಳೆ ಸಾಹಿತ್ಯ ಬೇರೆ ಯಾವ ಭಾರತೀಯ ಭಾಷೆಯಲ್ಲೂ ಇಲ್ಲ
- ಕನ್ನಡ ಛಂದಸ್ಸಿಗೆ ಯಾವ ಭಾಷೆಯೂ ಸಾಟಿಯಿಲ್ಲ
ಹೆಮ್ಮೆಯಿಂದ ಹೇಳು ನಾನೊಬ್ಬ ಕನ್ನಡಿಗ