ಹಂಸವೆಲ್ಲಿ ಹಾರುವೆ?
ಸಪ್ತ ಸಾಗರದಾಚೆಗೆ, ಸುಪ್ತ ಮನಸಿನ ತೀರಕೆ
ನಿನ ಕನಸಿನ ರೆಕ್ಕೆಯ ಗರಿ ಬಿಚ್ಚಿ
ಒಳ ಮನಸಿನ ದಿಟ್ಟೆಯ ಗೆರೆ ಹಚ್ಚಿ
ದೂರತೀರದಾಚೆಗೆ ನೂರು ಮನಸಿನ ವೇಗದಿ
ನೆನಪಿನ ಮನೆಯಂಗಳದಿಂದ
ಭರವಸೆಗಳ ಕಂಗಳ ತುಂಬಿ
ನಾಳೆಗಳ ನಾಡಿಗೆ ಸಾಧನೆಯ ಗೂಡಿಗೆ
ಸರಿಗಮಗಳ ಗಾಳಿಯನೇರಿ
ಅಪಸ್ವರಗಳ ಧಾಳಿಯ ಮೀರಿ
ರಾಗಗಳ ನಾಡಿಗೆ ಅನುರಾಗದ ಗೂಡಿಗೆ
ನಿನ್ನೆಯ ಕಹಿ ಜಾಲವ ಹರಿದು
ನಿನ್ನಯ ವರ ಮಾಲೆಯ ಹಿಡಿದು
ನಲ್ಲನಿರುವ ನಾಡಿಗೆ ನಾಳೆ ಬಾಳೊ ಗೂಡಿಗೆ
-ಗೀಚಿದವರು ಗುಂಗುರು ಗುರು
Archive for May 2nd, 2007
ಹಾರುತ ದೂರ ದೂರ
Posted in kannada, poem, poetry, ಕನ್ನಡ, ಕವನ, ಕವಿತೆ, ಗೀತೆ, ಹಾಡು on May 2, 2007 | Leave a Comment »
ಕನ್ನಡ ನಾರಿ ಮಹಾತ್ಮೆ
Posted in India, british, history, independence, kannada, ಇತಿಹಾಸ, ಕನ್ನಡ, ಚರಿತ್ರೆ, ಭಾರತ, ಸ್ವತಂತ್ರ, ಸ್ವಾತಂತ್ರ್ಯ on May 2, 2007 | Leave a Comment »
ಭಾರತದಲ್ಲಿ ಬ್ರಿಟೀಷರ ವಿರುದ್ಡ ಹೋರಾಡಿದ ಮೊದಲ ಮಹಿಳೆ ಯಾರೆಂದು ಕೇಳಿದರೆ ಏನೆನ್ನುತ್ತೀರಿ?
ಝಾನ್ಸಿ ರಾಣಿ ಲಕ್ಷ್ಮೀಬಾಯಿ ನಿಮ್ಮ ಉತ್ತರವಾದರೆ ಅದು ತಪ್ಪು !
ಭಾರತದಲ್ಲಿ ಬ್ರಿಟೀಷರ ವಿರುದ್ಡ ಹೋರಾಡಿದ ಮೊದಲ ಮಹಿಳೆ – ಕನ್ನಡದ ವೀರ ವನಿತೆ ಕಿತ್ತೂರು ಚೆನ್ನಮ್ಮ
ಅಲ್ಲದೆ ಅದಕ್ಕೂ ಮುಂಚೆ ಪೋರ್ಚುಗೀಸರ ವಿರುದ್ಡ ಕನ್ನಡದ ಇನ್ನೋರ್ವ ವೀರ ವನಿತೆ ಅಬ್ಬಕ್ಕ ಹೋರಾಡಿದ್ದಳು. ಆದ್ದರಿಂದ, ಭಾರತದಲ್ಲಿ ಯೂರೋಪಿಯನ್ನರ ವಿರುದ್ಡ ಹೋರಾಡಿದ ಮೊದಲ ಮಹಿಳೆ – ಕನ್ನಡದ ವೀರ ವನಿತೆ ಅಬ್ಬಕ್ಕ
ಸುಧೆಯೋ ಕನ್ನಡ ಸವಿನುಡಿಯೋ
Posted in history, kannada, literature, ಇತಿಹಾಸ, ಕನ್ನಡ, ಚರಿತ್ರೆ, ಭಾಷೆ on May 2, 2007 | Leave a Comment »
ಕನ್ನಡದ ಬಗ್ಗೆ ನಿಮಗೆಷ್ಟು ಗೊತ್ತು?
ಭಾರತೀಯ ಭಾಷೆಗಳಲ್ಲಿ ಸಂಸ್ಕ್ರತ ಹಾಗೂ ತಮಿಳಿನ ನಂತರ ಕನ್ನಡವೇ ಅತ್ಯಂತ ಹಳೆಯ ಭಾಷೆ
ಕನ್ನಡಕ್ಕೆ ೨೦೦೦ ವರ್ಷಗಳ ಇತಿಹಾಸವಿದೆ
ಕನ್ನಡಕ್ಕೆ ಅತಿ ಹೆಚ್ಚು ಜ್ನಾನಪೀಠ ಪ್ರಶಸ್ತಿಗಳು ದೊರೆತಿವೆ. ಇದುವರೆಗೂ ಒಟ್ಟು 7. ರಾಷ್ತ್ರ ಭಾಷೆ ಹಿಂದಿಗೆ 6 ದೊರೆತಿವೆ.
ಆಚಾರ್ಯ ವಿನೋಭಾ ಭಾವೆ ಕನ್ನಡದ ಲಿಪಿಯನ್ನು ‘ವಿಶ್ವ ಲಿಪಿಗಳ ರಾಣಿ’ ಎಂದು ಕರೆದರು
ಇಂಗ್ಲೀಷಿಗೆ ಸ್ವಂತ ಲಿಪಿಯಿಲ್ಲ, ಅದನ್ನು ರೋಮನ್ ಲಿಪಿಯಲ್ಲಿ ಬರೆಯುತ್ತಾರೆ. ಹಿಂದಿಗೆ ಸ್ವಂತ ಲಿಪಿಯಿಲ್ಲ, ಅದನ್ನು ದೇವನಾಗರಿ ಲಿಪಿಯಲ್ಲಿ ಬರೆಯುತ್ತಾರೆ. ಕನ್ನಡಕ್ಕೆ ಸ್ವಂತ ಲಿಪಿಯಿದೆ.
ಅಮೋಘವರ್ಷನು ತನ್ನ [...]
ಸೃಷ್ಟಿ-ಸಂಗೀತ
Posted in kannada, poem, poetry, ಕನ್ನಡ, ಕವನ, ಕವಿತೆ, ಗೀತೆ, ಹಾಡು on May 2, 2007 | Leave a Comment »
ದುಂಬಿಯ ಝೇಂಕಾರ ಋಷಿ ಮುನಿ ಓಂಕಾರ
ಮಂತ್ರದ ಹ್ರೀಂಕಾರ ಸಿಂಹದ ಹೂಂಕಾರ
ನಾದಲೀನ ಲೀನನಾದೆ ನಾ ನೀದಮಾಗ ಗಾನದಿಂ ದಿನ ||
ಬೆಳ್ಳಿಕಿರಣಗಳ ಅರುಣರಾಗ ಬಳ್ಳಿಮರದಡಿಯ ನಿಸರಿಗಮಗ
ಗಲ್ಲಿಹೈಕಳ ಕುಣಿತ, ಲಾಗ, ಹಲ್ಲಿ ಮೈಮರೆತು ಲೊಚೆದ ರಾಗ
ನಾ ತಲ್ಲೀನ ನಾದೆನೀ ದಿನ ಧೀಂ ತಿಲ್ಲಾನವಾಯಿತೀ ಮನ ||
ಜಲದ ಧಾರೆ ಕಲಕಲಕಲರವ ಜಲಜದೊಡತಿ ಕರ ಸರಿವ ಪರಿಯವ
ಜಲದಿ ನೀರೆ ನಲಿ ನಲಿವ ಉಲಿತವ ಜಳಕವಾಡುತಿರೆ ಬಳುಕೊ ಅಲೆ ರವ
ಪುರುಷ ಪ್ರಕೃತಿ ಸರಿಗ ಸಂಗಮ ಜಗದ ಸಂಸ್ಕೃತಿ ಎನಿತು ಧಿಂಧಿಮ ||
-ಗೀಚಿದವರು ಗುಂಗುರು ಗುರು
ಕನ್ನಡ ಸಿನೆಮಾ ಚೆನ್ನಾಗಿಲ್ಲ ಅಂದ ಅವನು
Posted in kannada, movie, ಕನ್ನಡ, ಸಿನೆಮಾ on May 2, 2007 | 3 Comments »
ಮೊನ್ನೆ ಹಳೆಯ ಸ್ನೇಹಿತನೊಬ್ಬ ಸಿಕ್ಕ
ಅದೂ ಇದೂ ಮಾತಾಡ್ತಾ, ” ‘ಮುಂಗಾರು ಮಳೆ’ ನೋಡಿದ್ಯಾ? ಒಂಥರಾ ಚೆನ್ನಾಗಿದೆ” ಅಂದೆ.
ಅದಕ್ಕೆ ಅವನು, ‘ಕನ್ನಡ ಸಿನೆಮಾ ಚೆನ್ನಾಗಿರೊಲ್ಲ, ಅದಕ್ಕೆ ನಾನು ನೋಡೊಲ್ಲ’ ಅಂದ.
ಒದೀಬೇಕು ಅನ್ನಿಸ್ತು, ಆದರೂ ಸುಧಾರಿಸಿಕೊಂಡು ಕೇಳಿದೆ, ‘ನೀನು ನೋಡಿದ ಕೊನೆಯ ಕನ್ನಡ ಚಿತ್ರ ಯಾವುದಣ್ಣ?’
‘ನೆನಪಿಲ್ಲ ಗುರು, ಒಂದು ಹತ್ತು ವರ್ಷದ ಮೇಲಾಗಿದೆ’ ಅಂದ
ನನ್ನ ಕೈಲಿ ಇನ್ನು ತಡೆಯೊಕ್ಕಾಗ್ಲಿಲ್ಲ, ‘ಡಬ್ಬಾ ನನ್ನ ಮಗನೆ, ಹತ್ತು ವರ್ಷದಿಂದ ಒಂದೂ ಕನ್ನಡ ಚಿತ್ರ ನೋಡಿಲ್ಲ ನೀನು. ಅದು ಹೇಗೆ ಕನ್ನಡ ಚಿತ್ರ ಚೆನಾಗಿರೊಲ್ಲ ಅಂತ [...]
ಕಾಲು – ಮೊಬೈಲು
Posted in ಕನ್ನಡ, ಶಾಯರಿ, ಹನಿಗವನ on May 2, 2007 | Leave a Comment »
ಹೀಗೊಂದು SMS ಬಂತು:
Mobileನಲ್ಲಿ balance ಇಲ್ಲ ಅಂದ್ರೆ ಕಾಲ್ ಮಾಡೊಕ್ಕಾಗೊಲ್ಲ
ಮನುಷ್ಯಂಗೆ ಕಾಲಿಲ್ಲ ಅಂದ್ರೆ balance ಮಾಡೊಕ್ಕಾಗೊಲ್ಲ !