Feed on
Posts
Comments

Pranesh Comedy.. Enjoy ಮಾಡಿ :)

ಬಹಳ ದಿನದಿಂದ ಈ ಸುಂದರ ಉದಯ ಗೀತೆಯನ್ನು ಹುಡುಕುತ್ತಿದ್ದೆ. ಕೊನೆಗೂ ಸಿಕ್ಕಿತ್ತು.

ಕಾಕನಕೋಟೆ ಚಿತ್ರದ ‘ನೇಸಾರ ನೋಡು’ ಎಂಬ ಸುಮಧುರ ಸುರ್ಯೋದಯ ಗೀತೆ. ನಿಮಗೂ ಇಷ್ಟವಾಯಿತೆ?

ಇದೇ ಚಿತ್ರದ ಇನ್ನೆರಡು ಸುಮಧುರ ಗೀತೆಗಳು ಕೆಳಗಿವೆ.. ಕೇಳಿ ಆನಂದಿಸಿ..

Click here for the english version of this article 

ಅಮೇರಿಕಾದಲ್ಲಿ ರಾಷ್ಟ್ರಾಧ್ಯಕ್ಷ ಚುನಾವಣೆಗಳು ಸಮೀಪಿಸುತ್ತಿವೆ

ದೇಶದ ಎರಡೂ ಪ್ರಮುಖ ರಾಜಕೀಯ ಪಕ್ಷಗಳಾದ ಡೆಮೊಕ್ರಾಟ್ ಮತ್ತು ರಿಪಬ್ಲಿಕನ್ ಪಕ್ಷಗಳು ಚುನಾವಣೆ ಗೆಲ್ಲಲ್ಲು ಹಣಾಹಣಿ ನಡೆಸುತ್ತಿವೆ. ಭಯೋತ್ಪಾದನೆ ಚುನಾವಣೆಯ ಪ್ರಮುಖ ವಿಷಯವಾಗಿದೆ. ಈ ಬಗ್ಗೆ ದೇಶದ ಎರಡು ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಏನೆನ್ನುತ್ತಾರೋ ನೋಡೋಣ!

ಡೆಮೊಕ್ರಾಟ್ ಅಭಿಪ್ರಾಯ - ಭಯೋತ್ಪಾದನೆ ಮತ್ತು ಒಂದು ದೇಶ

ಡೆಮೊಕ್ರಾಟ್ ಅಭ್ಯರ್ಥಿ ಬಾರಾಕ್ ಒಬಾಮಾ ಪ್ರಕಾರ, ಆತನೇನಾದರೂ ಅಮೇರಿಕಾದ ರಾಷ್ಟ್ರಾಧ್ಯಕ್ಷನಾದರೆ, ಅವರು ಮಾಡುವ ಮೊದಲ ಕೆಲಸ, “ಇರಾಕ್ ನಿಂದ ಆಮೇರಿಕನ್ ಸೇನೆಯನ್ನು ವಾಪಸು ಪಡೆದು ಅದನ್ನು ಪಾಕಿಸ್ತಾನಕ್ಕೆ ಕಳುಹಿಸುವುದು! ಬಾರಾಕ್ ಒಬಾಮಾ ಪ್ರಕಾರ, ಇರಾಕಿಗೆ ಅಮೇರಿಕನ್ ಸೇನೆ ಕಳಿಸಿದ್ದು ಒಂದು ದೊಡ್ಡ ತಪ್ಪು, ಪ್ರಪಂಚದ ಭಯೋತ್ಪಾದಕರೆಲ್ಲರೂ ಪಾಕಿಸ್ತಾನದಲ್ಲಿರುವುದರಿಂದ ಭಯೋತ್ಪಾದನೆಯನ್ನು ಮಟ್ಟ ಹಾಕಲು ಅಲ್ಲಿಗೆ ಸೇನೆ ರವಾನಿಸುವುದು ಅತ್ಯಾವಶ್ಯಕ”!

ರಿಪಬ್ಲಿಕನ್ ಅಭಿಪ್ರಾಯ - ಭಯೋತ್ಪಾದನೆ ಮತ್ತು ಒಂದು ಧರ್ಮ

ರಿಪಬ್ಲಿಕನ್ ಅಭ್ಯರ್ಥಿ ಟಾಮ್ ಟಾಂಕ್ರೆಡೋ ಏನು ಹೇಳುತ್ತಾರೆ ನೋಡಿ! ಅವರೇನಾದರೂ ಅಮೇರಿಕಾದ ರಾಷ್ಟ್ರಾಧ್ಯಕ್ಷರಾದರೆ, ಎಲ್ಲ ಭಯೋತ್ಪಾದಕರಿಗೂ ನೀಡುವ ಎಚ್ಚರಿಕೆ ಏನೆಂದರೆ, “ಇನ್ನು ಮುಂದೆ ಏನಾದರೂ ಅಮೇರಿಕಾದ ನೆಲದ ಮೇಲೆ ಭಯೋತ್ಪಾದಕ ದಾಳಿ ನಡೆದುದ್ದೇ ಆದರೆ, ಮುಸಲ್ಮಾನರ ಪವಿತ್ರ ಯಾತ್ರಾ ಸ್ಥಳಗಳಾದ ಮೆಕ್ಕಾ ಹಾಗೂ ಮದೀನಾವನ್ನು ಅಮೇರಿಕಾ ನೆಲಸಮ ಮಾಡುತ್ತದೆ”!

ಭಯೋತ್ಪಾದನೆಯ ಮೇಲಿನ ಸಮರ

ನನಗೆ ತಿಳಿದಿರುವಂತೆ, ಭಯೋತ್ಪಾದನೆಯನ್ನು ಒಂದು ಅಸ್ತ್ರವನ್ನಾಗಿ ಬಳಸಿಕೊಂಡಿದ್ದು ಒಂದು ರಾಷ್ಟ್ರ, ಅದರ ಹೆಸರು ಪಾಕಿಸ್ತಾನ. ಭಯೋತ್ಪಾದನೆಯ ಮೂಲವಿರುವುದು ಪಾಕಿಸ್ತಾನದಲ್ಲಿ, ಮೆಕ್ಕಾ ಅಥವಾ ಮದೀನದಲ್ಲಲ್ಲ.. ಆದ್ದರಿಂದ ಒಬಾಮಾ ಹೇಳಿದ್ದು ಸರಿ ಎನಿಸುತ್ತದೆ.

ಟಾಂಕ್ರೆಡೊ ಈ ಸಮೀಕರಣದಲ್ಲಿ ಅನವಶ್ಯಕ ಪಾಲುದಾರರನ್ನು ಎಳೆದು ತರುವ ಮೂಲಕ, ವಿಷಯವನ್ನು ಇನ್ನಷ್ಟು ಜಟಿಲಗೊಳಿಸುತ್ತಿದ್ದಾರೆ ಎನಿಸುತ್ತದೆ. ನೀವೇನಂತೀರಿ?

Click here for the english version of this article

ಪ್ರಜಾಪ್ರಭುತ್ವದ ನಾಲ್ಕು ಆಧಾರ ಸ್ತಂಭಗಳೆಂದರೆ

  • ಶಾಸಕಾಂಗ (ಸರಕಾರ, ಮಂತ್ರಿಗಳು, ಶಾಸಕರು, ಲೋಕಸಭಾ ಸದಸ್ಯರು ಇತ್ಯಾದಿ)
  • ರಾಜ್ಯಾಂಗ (ಅಧಿಕಾರಿಗಳು)
  • ನ್ಯಾಯಾಂಗ (ವಕೀಲರು, ನ್ಯಾಯಮೂರ್ತಿಗಳು)
  • ಪತ್ರಿಕೋದ್ಯಮ (ಮಾಧ್ಯಮ, ಪತ್ರಕರ್ತರು)

ನಮಗೆಲ್ಲ ತಿಳಿದಿರುವಂತೆ ಭಾರತದಲ್ಲಿ ಶಾಸಕಾಂಗ ಮತ್ತು ರಾಜ್ಯಾಂಗದ ಮೇಲೆ ಜನರಿಗಿರುವ ನಂಬಿಕೆ ಅಷ್ಟಕ್ಕಷ್ಟೆ..

ಸರಕಾರ, ಮಂತ್ರಿಗಳು, ಶಾಸಕರು ಇವರಲ್ಲಿ ಹೆಚ್ಚಿನ ಮಂದಿ ಭ್ರಷ್ಟರು, ಅಧಿಕಾರಿಗಳೂ ಇದಕ್ಕೆ ಹೊರತಲ್ಲ.. ಎಲ್ಲ ಕೆಲಸಕ್ಕೂ ಲಂಚ ಕೊಡಬೇಕು..

ಜನರಿಗೆ ಅಲ್ಪ ಸ್ವಲ್ಪ ವಿಶ್ವಾಸವೇನಾದರೂ ಉಳಿದಿದ್ದರೆ, ಅದು ನ್ಯಾಯಾಂಗ ಹಾಗೂ ಮಾಧ್ಯಮದ ಮೇಲೆ ಮಾತ್ರ..

ಪರಿಸ್ಥಿತಿ ಹೀಗಿರುವಾಗ, ನಮ್ಮ ಕೇಂದ್ರ ಸರಕಾರ ಏನು ಮಾಡಲು ಹೊರಟಿದೆ ನೋಡಿ!

ಸರಕಾರ ಒಂದು ಹೊಸ ಕಾನೂನನ್ನು ಜಾರಿ ಮಾಡಲು ಯತ್ನಿಸುತ್ತಿದೆ, ಅದರ ಪ್ರಕಾರ NDTV, CNN-IBN, StarNews, ಇತ್ಯಾದಿ ದೇಶದ ಪ್ರತಿಯೊಂದು ಮಾಧ್ಯಮ ವಾಹಿನಿಯು (cable channel), ಯಾವುದೇ ಸುದ್ದಿಯನ್ನು ಪ್ರಕಟಿಸುವ ಮುನ್ನ ಸರಕಾರದ ಅಪ್ಪಣೆ ಪಡೆಯಬೇಕು!!

ಈ ಕಾನೂನಿನ ಪ್ರಕಾರ, ದೇಶದ ಪ್ರತಿಯೊಂದು ಮಾಧ್ಯಮ ಹಾಗೂ ಸುದ್ದಿ ವಾಹಿನಿಯಲ್ಲಿ ಸರಕಾರದ ಪ್ರತಿನಿಧಿಯೊಬ್ಬರಿರುತ್ತಾರೆ, ಹಾಗೂ ಆ ವಾಹಿನಿಯಲ್ಲಿ ಪ್ರಕಟವಾಗುವ ಪ್ರತಿಯೊಂದು ಸುದ್ದಿಯನ್ನು ಈ ಸರಕಾರೀ ಪ್ರತಿನಿಧಿ ಮೊದಲು ನೋಡಿ, ಯಾವ ತಕರಾರನ್ನೂ ಎತ್ತದಿದ್ದರೆ ಮಾತ್ರ ಆ ಸುದ್ದಿಯನ್ನು ಪ್ರಕಟಿಸತಕ್ಕದ್ದು!

ಈ ಹೊಸ ಕಾನೂನಿನ ಪ್ರಕಾರ, ಮಾಧ್ಯಮದ ಸ್ವಾತಂತ್ರ್ಯಹರಣವಾಗಲಿದೆ. ಎಲ್ಲ ಸುದ್ದಿವಾಹಿನಿಗಳೂ ಇನ್ನು ಮೇಲೆ ದೂರದರ್ಶನದ ಹಾಗೆ ಸರಕಾರೀವಾಹಿನಿಗಳಾಗುತ್ತವೆ!

ಈ ಹೊಸ ಕಾನೂನಿನ ಪ್ರಕಾರ, ಕೈಗಾರಿಕಾ ಸಂಬಂಧಿ ವಿವಾದಗಳನ್ನು ಸುದ್ದಿಮಾಧ್ಯಮಗಳು ಪ್ರಕಟಿಸುವಂತಿಲ್ಲ! ಆದ್ದರಿಂದ ಈ ಕಾನೂನು ಜಾರಿಯಾದ ಮೇಲೆ ಸಿಂಗೂರ್, ನಂದಿಗ್ರಾಮದಂತಹ ಸುದ್ದಿಗಳು ಪ್ರಕಟವಾಗುವುದಿಲ್ಲ!

ಈ ಹೊಸ ಕಾನೂನಿನ ಪ್ರಕಾರ, ಜನತೆಯ ನೆಮ್ಮದಿ (public order) ಕೆಡಿಸುವಂಥಹ ಸುದ್ದಿಯನ್ನು ಪ್ರಕಟಿಸುವಂತಿಲ್ಲ! ಜನತೆಯ ನೆಮ್ಮದಿ ಕೆಡಿಸುವಂಥಹ ಸುದ್ದಿ ಯಾವುದೆಂಬುದನ್ನು ಸರಕಾರ ನಿರ್ಧರಿಸುತ್ತದೆ!

ಈ ಹೊಸ ಕಾನೂನಿನ ಪ್ರಕಾರ, ತೆಹೆಲ್ಕಾದಂಥಹ Sting Journalism ನಡೆಸುವ ಮೊದಲು ಮಾಧ್ಯಮಗಳು ಅದಕ್ಕೆ ಸಂಬಂಧಪಟ್ಟವರಿಂದ ಅನುಮತಿ ಪಡೆಯಬೇಕು!! ಕೋಳೀ ಕೇಳೀ ಮಸಾಲೆ ಅರಿಯೊಕ್ಕಾಗುತ್ತ್ಯೇ? ಎಂಥಹ ಮೂರ್ಖ ಕಾನೂನು!

ಇನ್ನು ಒಂದು ಒಂದೂವರೆ ವರ್ಷದಲ್ಲಿ ಸಾರ್ವತ್ರಿಕ ಚುನಾವಣೆಗಳಿರುವುದರಿಂದ, ಯು.ಪಿ.ಎ. ಸರಕಾರಕ್ಕೆ ಇಂಥಹ ಒಂದು ಕಾನೂನಿನ ಅವಶ್ಯಕತೆ ಇದೆ. ಜನಸಾಮಾನ್ಯರ ಸರಕಾರ (common man’s government) ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ UPA ಮಾಡಿರುವ ಎಲ್ಲ ಕೆಲಸಗಳೂ ಜನವಿರೋಧಿ, ಅಗತ್ಯ ವಸ್ತುಗಳ ಬೆಲೆ ಏರಿದೆ, ಜನರಲ್ಲಿ ಅಸಮಾಧಾನವಿದೆ, ರಾಜ್ಯ ಚುನಾವಣೆಗಳಲ್ಲಿ UPA ಹಾಗೂ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ, ಆದ್ದರಿಂದ ಸುದ್ದಿ ಮಾಧ್ಯಮವನ್ನು ಕೆಟ್ಟಿ ಹಾಕಿ, ತನಗೆ ಅನುಕೂಲವಾಗುವಂತಹ ಸುದ್ದಿಯನ್ನು ಮಾತ್ರ ಪ್ರಕಟಿಸಿ, ಸರಕಾರಿ ವಿರೋಧಿ ಸುದ್ದಿಗೆ ಕಡಿವಾಣ ಹಾಕಲು, UPA ಸರಕಾರ ಈ ಹೊಸ ಮಾಧ್ಯಮ ಕಾನೂನಿನ ಪಿತೂರಿ ನಡೆಸಿದೆ.

ಏನೇ ಆದರೂ ‘ಅಂತರ್ಜಾಲ’ (internet) ಎಂಬ ಲೋಕದಲ್ಲಿ ಯಾವುದೇ ಸುದ್ದಿ, ಕತ್ತರಿ ಇಲ್ಲದೇ ಪ್ರಸಾರವಾಗುತ್ತದೆ ಎಂಬುದು ಈ ಸರಕಾರಕ್ಕೆ ತಿಳಿದಂತಿಲ್ಲ! ನಮ್ಮ ಅಂತರ್ಜಾಲದಲ್ಲಿ ಎಲ್ಲಾ ಸುದ್ದಿಯೂ ಕ್ಷಣಮಾತ್ರದಲ್ಲಿ ವಿಶ್ವದೆಲ್ಲೆಡೆ ಪ್ರಕಟವಾಗುತ್ತದೆ!

ಅಂತರ್ಜಾಲವನ್ನು ನಿಯಂತ್ರಿಸಲು ಸರಕಾರ ಏನು ಮಾಡುತ್ತದೆ?? ಚೀನಾದ ಕಮ್ಯೂನಿಸ್ಟ್ ಸರಕಾರದ ಹಾಗೆ, ‘ಅಂತರ್ಜಾಲ ಸೋಸು’ವ (internet filters) ಚಿಂತನೆಯೇನಾದರೂ UPA ಕೆಂದ್ರ ಸರಕಾರಕ್ಕಿದೆಯೆ? ಅದು ಅಷ್ಟು ಸುಲಭವಲ್ಲ ಬಿಡಿ, ಚೀನದಲ್ಲೇ ಜನ ಸರಕಾರೀ ಬೇಲಿ ದಾಟಿ ಅಂತರ್ಜಾಲದಲ್ಲಿ ಎಲ್ಲಾ ಸುದ್ದಿನೋಡುತ್ತಾರೆ, ಹೀಗಿರುವಾಗ ಭಾರತದಲ್ಲಿ ನಮಗೆ ನೋಡಲಾಗುವುದಿಲ್ಲವೆ! :)

ಆದರೆ ನೋಡಿ, ಎಂಥಹ ಸರಕಾರಕ್ಕೆ ಮತ ಚಲಾಯಿಸಿ ಅಧಿಕಾರಕ್ಕೆ ತಂದಿದ್ದೀರಿ ಎಂದು!

ಮಾಹಿತಿ ಹಕ್ಕು? ಏನು ಹಾಗೆಂದರೆ? ಕ್ಷಮಿಸಿ, ಇದು ಕಾಂಗ್ರೆಸ್ಸಿನ UPA ಸರಕಾರ, ನಿಮ್ಮ ಅದ್ರಷ್ಟವನ್ನು ಮುಂದಿನ ಚುನಾವಣೆಯಲ್ಲಿ ಪರೀಕ್ಷಿಸಿ ನೋಡಿ… 

ಇತ್ತೀಚಿನ ಸುದ್ದಿ:

“ಪಾಕಿಸ್ತಾನಿ ಮಿಲಿಟರಿ ಮೂಲಗಳ ಪ್ರಕಾರ ‘ಪಾಕಿಸ್ತಾನವು ತನ್ನ ಪರಮಾಣು ಬಾಂಬನ್ನು ಹೊತ್ತೊಯ್ಯುವ ಕ್ಷಮತೆಯುಳ್ಳ ರಾಡಾರ್ ನಿರ್ದೇಶಿತ ಕ್ಷಿಪಣಿಯ ಯಶಸ್ವಿ ಪರೀಕ್ಷೆ ನಡೆಸಿದೆ’. ಈ ಸಂಬಂಧ ಪಾಕ್ ಅಧ್ಯಕ್ಷ ಪರ್ವೆಜ್ ಮುಷರ್ರಫ್ ಮತ್ತು ಪ್ರಧಾನಿ ಶೌಕತ್ ಅಜೀಜ್ ದೇಶದ ವಿಜ್ಞಾನಿ ಹಾಗೂ ತಂತ್ರಜ್ಞಾನಿಗಳನ್ನು ಅಭಿನಂದಿಸಿದ್ದಾರೆ!”

ನಿಜಕ್ಕೂ ಇದರ ಅರ್ಥ ಏನೆಂದರೆ
“ಪಾಕಿಸ್ತಾನವು ಉತ್ತರ ಕೊರಿಯಾ ತಯಾರಿತ ಪರಮಾಣು ಕ್ಷಮತೆಯ ಕ್ಷಿಪಣಿಯನ್ನು ಸೌದಿ ಅರೇಬಿಯಾದ ಹಣ ಸಹಾಯದಿಂದ ಕೊಂಡುಕೊಂಡು, ನಂತರ ಪಾಕ್ ವಿಜ್ಞಾನಿಗಳು ಆ ಕ್ಷಿಪಣಿಯ ಎಡಪಂಥೀಯ ಕೆಂಬಣ್ಣಕ್ಕೆ ಪಾಕಿ ಹಸಿರು ಬಣ್ಣ ಬಳಿದು, ಅದಕ್ಕೆ ಬಾರತದ ಮೇಲೆ ಹಿಂದೆ ದಾಳಿ ನಡೆಸಿದ್ದ ಮುಸ್ಲಿಂ ದಂಡುಕೋರರಾದ ಘೌರಿ, ಘಙ್ನಿ ಮುಂತಾದವರ ಹೆಸರನ್ನಿಟ್ಟು, ನಂತರ ಚೀನಾದ ತಂತ್ರಜ್ಞರ ಸಹಾಯದಿಂದ, ಅದರ ಪರೀಕ್ಷೆ ನಡೆಸಿದ್ದಾರೆ!”

ಪಾಕಿಸ್ತಾನವು ಇಂಥಹ ಪರೀಕ್ಷೆಗಳನ್ನು ಆಗಾಗ ನಡೆಸುತ್ತಿರುತ್ತದೆ. ಕಾರಣ?
ಉತ್ತರ ಕೊರಿಯಾ ಮತ್ತು ಚೀನಾ ತಮ್ಮ ಕಳಪೆ ಗುಣಮಟ್ಟದ ಕಡಿಮೆ ಬೆಲೆಯ ಉತ್ಪನ್ನಗಳಿಗೆ ಪ್ರಸಿದ್ಧವಾಗಿವೆ. ಆದ್ದರಿಂದ ಪಾಕಿಸ್ತಾನಕ್ಕೆ ತಾನು ಕೊಂಡುಕೊಂಡ ಕ್ಷಿಪಣಿಗಳ ಗುಣಮಟ್ಟದ ಬಗ್ಗೆ ಕಳವಳವಿದೆ. ಇಂಥಹ ಆಗಾಗಿನ ಪ್ರಯೋಗಗಳಿಂದ ಅದು ಈ ಕ್ಷಿಪಣಿಗಳ ಗುಣಮಟ್ಟ ಪರೀಕ್ಷಿಸುವುದರೊಂದಿಗೆ, ಆ ಕ್ಷಿಪಣಿಗಳನ್ನು ಉಡಾಯಿಸುವ ಪರಿ ತನ್ನ ವಿಜ್ಞಾನಿಗಳಿಗೆ ತಿಳಿದಿದೆಯೆಂದು ಖಾತ್ರಿ ಪಡಿಸಿಕೊಳ್ಳುತಿರುತ್ತದೆ :)

Click here for the English version of this article 

ಈ ಕೆಳಗಿನ ವಾಕ್ಚಿತ್ರವನ್ನು ನೋಡಿದರೆ ನಿಮಗೇ ಗೊತ್ತಾಗುತ್ತೆ ಚೈನಾದಲ್ಲಿ ಇವತ್ತು ಏನು ನಡೀತಾ ಇದೆ ಅಂತ.

ಇಂಥಹ ಒಂದು ಅಭಿವೃದ್ಧಿ ನಮ್ಮ ದೇಶಕ್ಕೂ ಬೇಕಂತೀರಾ? ಬೇಡವೇ ಬೇಡಪ್ಪ. ನಮ್ಮ ಪ್ರಜಾಪ್ರಭುತ್ವದಲ್ಲಿ ಅಭಿವೃದ್ಧಿ ಸ್ವಲ್ಪ ಮಂದಗತಿಯಲ್ಲಿ ಸಾಗಿದರೂ ಪರ್ವಾಗಿಲ್ಲ, ನಮಗೆ ಇಂಥಹ ಒಂದು ದಬ್ಬಾಳಿಕೆಯ ಎಡಪಂಥೀಯ ಆಳ್ವಿಕೆ ಮಾತ್ರ ಬೇಡ. ಏನಂತೀರಾ?

ನೀವೇನಾದರೂ ಎಡಪಂಥೀಯ ಬೆಂಬಲಿಗರಾಗಿದ್ದರೆ ಒಮ್ಮೆ ಈ ಕೆಳಗಿನ ಚಿತ್ರ ನೋಡಿ ನಂತರ ಯೋಚನೆ ಮಾಡಿ ನೀವು ಎಂಥಹವರನ್ನು ಬೆಂಬಲಿಸುತ್ತಿದ್ದೀರಾ ಅಂತ! ನಮ್ಮ ಪಶ್ಚಿಮಬಂಗಾಳದಲ್ಲಿ ಇತ್ತೀಚೆಗೆ ನಡೆದ ಸಿಂಗೂರ್ ನಂದಿಗ್ರಾಮ ಘಟನೆಗಳು ನೆನಪಿದೆಯಲ್ಲ? 

ಎಲ್ಲ ರಾಜಕೀಯ ಪಕ್ಷಗಳು ಅಧಿಕಾರಕ್ಕಾಗಿ ಕೊಲೆ ಮಾಡಿದರೆ
ಚೀನಾದ ಎಡಪಂಥೀಯ ಪಕ್ಷಗಳು ಕೊಲೆ ಮಾಡುವುದಕ್ಕಾಗಿ ಅಧಿಕಾರಕ್ಕೆ ಬರುತ್ತಾರೆ!

ಚೀನಾದಲ್ಲಿ ಇನ್ನೂ ಏನೇನು ಅನಾಹುತಗಳು ನಡೆಯುತ್ತಿದೆ ಎಂದು ತಿಳಿಯಲು chinaview.wordpress.com ಗೆ ಭೇಟಿ ನೀಡಿ, ನಿಮಗೇ ಗೊತ್ತಾಗುತ್ತೆ! ಸಧ್ಯಕ್ಕೆ ಈ ಕೆಳಗಿನ ಚಲನಚಿತ್ರ (video) ನೋಡಿ

ಭಾಗ - ೧

ಭಾಗ - ೨

“ತಬ್ಬಲಿಯು ನೀನಾದೆ ಮಗನೆ” ಚಿತ್ರದ ಸುಮಧುರ ಸಂಗೀತದ ಜಾನಪದ ”ಗೋವಿನ ಹಾಡು”

Older Posts »